powered by bluebytes  
 

    Monday , June 08, 2015

     (Visit Website)

   Publication: kannada.eenaduindia.com , Agency:Bureau
   Edition: Internet , Page No: 0 , Location: Internet , Size(sq.cms): 0
  

Export Options >        PDF       JPEG              
Qualify Article Delete
  Hide   

ಹರ್ನಿಯಾ ಸಮಸ್ಯೆಯ ಚಿಕಿತ್ಸಾ ಕ್ಷೇತ್ರದಲ್ಲಿ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಕ್ರಾಂತಿಕಾರಿ ಉಪಕರಣಗಳ ಮುಂಚೂಣಿಯ ಬಹುರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಈಗ ತನ್ನ ಕಾರ್ಯಕ್ರಮದ ಮೂರನೇ ಸರಣಿಯನ್ನು ನಗರದಲ್ಲಿ ಆರಂಭಿಸಿದೆ. ಸರ್ಜಿಕಲ್ ಟ್ರೇನಿಂಗ್ ಅಂಡ್ ಎಜುಕೇಷನಲ್ ಪ್ರೋಗ್ರಾಮ್  ತರಬೇತಿ ಮತ್ತು ಶಿಕ್ಷಣ ಕಾರ್ಯಕ್ರಮವಾಗಿದ್ದು ಹರ್ನಿಯಾ ಕ್ಷೇತ್ರದಲ್ಲಿ ಉನ್ನತೀಕರಣ ಎತ್ತಿ ತೋರಿಸಲು ಭಾರತದ ವಿವಿಧ ನಗರಗಳಲ್ಲಿ ಆಯೋಜಿಸಲಾಗುತ್ತಿದೆ.

ಬೆಲ್ಜಿಯಂನ ಬಾನ್ ಹೀಡನ್‌ನ ಇಮೆಲ್ಡಾ ಹಾಸ್ಪಿಟಲ್‌ನ ಪ್ರಧಾನ ಶಸ್ತ್ರಕ್ರಿಯಾ ತಜ್ಞ ಡಾ. ಟಿಮ್ ಟಾಲೆನ್ಸ್ ಅವರು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಈ ಟಿಎಪಿಪಿ, ಟಿಇಪಿ ಮತ್ತು ಐಪಿಒಎಂ ಒಳಗೊಂಡ ಮೂರು ಶಸ್ತ್ರಕ್ರಿಯೆಗಳನ್ನು ನಡೆಸಿ ಯಶಸ್ವಿಯಾಗಿಸಿ ತೋರಿಸಿದರು. ಸಾಂಪ್ರದಾಯಿಕ ಮೆಶ್‌ನಿಂದ ಲಭ್ಯವಾಗದ ಲಾಭಗಳನ್ನು ವೈದ್ಯರು, ರೋಗಿಗಳಿಗೆ ಹಗುರ ತೂಕದ ವೆಂಟ್ರಲೈಟ್ ಎಸ್‌ಟಿ ನೀಡುತ್ತದೆ ಎಂದು ಸಾಬೀತುಪಡಿಸಿ ತೋರಿಸಿದ್ದಾರೆ.

ಈ ಕುರಿತು ಡಾ. ಟಿಮ್ ಟಾಲೆನ್ಸ್ ಅವರು ಮಾತನಾಡಿ, ಉದರ ದರ್ಶಕದ ಮೂಲಕ ದುರಸ್ತಿ ನಡೆಯುವ ಹರ್ನಿಯಾ ಕ್ರಮದಲ್ಲಿ ಚಿಕಿತ್ಸೆಯ ಗುಣಮಟ್ಟ ಸುಧಾರಿಸುವ ಉದ್ದೇಶವನ್ನು ಈ ನೂತನ ತಂತ್ರಜ್ಞಾನ ಹೊಂದಿದೆ. ಹರ್ನಿಯಾ ಮತ್ತೆ ಕಾಣಿಸಿಕೊಳ್ಳುವುದನ್ನು ವೆಂಟ್ರಾ ಲೈಟ್ ಎಸ್‌ಟಿ ಮೆಶ್ ಕಡಿಮೆ ಮಾಡುತ್ತದೆ ಎಂದರು.
 
Next News

All form fields are required.


Summary:
...
Date: Monday , June 08, 2015
Publication: kannada.eenaduindia.com, Agency: Bureau
Edition: Internet, Page No: 0, Location: Internet, Size(sq.cms): 0